ಕಲಾಭಿಮಾನಿಗಳಿಗೊಂದು ಸಿಹಿ ಸುದ್ದಿ!
ಹಿರಿಯ ಭಾಗವತ, ಯಕ್ಷಗುರು ಹಾಗೂ ಯಕ್ಷ ನಿರ್ದೇಶಕರಾದ ಶ್ರೀಯುತ ಗೋಪಾಲ ಗಾಣಿಗ ಹೆರಂಜಾಲು ಇವರು ಬರೆದ ‘ಯಕ್ಷ ಕಿಶೋರ ಅರ್ಥ ಸಹಿತ ಗ್ರಂಥ’ ಹಾಗೂ ‘ಹೆರಂಜಾಲು ಅಭಿನಂದನಾ ಗ್ರಂಥ’ ಬಿಡುಗಡೆ ಸಮಾರಂಭದ ಕುರಿತು ದಿನಾಂಕ 05-11-2023ರಂದು ರವಿವಾರ ಮಠಪಾಡಿ ನಂದಿಕೇಶ್ವರ ಯಕ್ಷಗಾನ ಕಲಾಸಂಘ ಇದರ ಗೌರವಾಧ್ಯಕ್ಷರಾದ ಶ್ರೀ ಚಂದ್ರಶೇಖರ ಕಲ್ಕೂರ್ ಇವರ ಅಧ್ಯಕ್ಷತೆಯಲ್ಲಿ ಅಂದು ಸೇರಿದ ಪದಾಧಿಕಾರಿಗೊಳೊಂದಿಗೆ ಸಮಾಲೋಚಿಸಲಾಯಿತು.
ಕಾರ್ಯಕ್ರಮ ಹಾಗೂ ಸಮಿತಿಯ ಕುರಿತ ಸಮಾಲೋಚನೆ ಸಭೆಯ ನೇತೃತ್ವವನ್ನು ಶ್ರೀ ಸದಾನಂದ ಪಾಟೀಲ್ ಅವರು ವಹಿಸಿಕೊಂಡಿದ್ದರು.
ಇದೊಂದು ಯಕ್ಷಗಾನ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆಯಾಗಲಿದ್ದು ಆದಷ್ಟು ಬೇಗ ನೆರವೇರಲಿ ಎಂದು ಹಾರೈಸೋಣ.
-Admin