ಹೊನ್ನಾವರ: ಸಂದೀಪ್ ಭಟ್ ಅವರ ‘ಗೆಲುವಿನ ಹೆಜ್ಜೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಿನ್ನೆ ಹೊನ್ನಾವರ ಸಮೀಪದ ಹೊಸಾಕುಳಿಯಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ಸಾಲಿಗ್ರಾಮ ಮೇಳದ ಯುವ ಯಕ್ಷಗಾನ ಕಲಾವಿದ ಚಂದ್ರಹಾಸ ಗೌಡ ಹೊಸಪಟ್ಟಣ ಅವರನ್ನು ಸನ್ಮಾನಿಸಲಾಯಿತು. ಸಂದೀಪ್ ಭಟ್ ಅವರು ಈಗಾಗಲೇ 25ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು, ಜೊತೆಯಲ್ಲಿ ಕಲೆಯ ಮೇಲಿನ ಅವರಿಗಿರುವ ಗೌರವ ಈ ಒಂದು ಅಪೂರ್ವ ಘಳಿಗೆಗೆ ಸಾಕ್ಷಿಯಾಯಿತು. ವೇದಿಕೆಯಲ್ಲಿ ಕುಮಟಾ ಶಾಸಕರಾದ ಶ್ರೀ ದಿನಕರ ಶೆಟ್ಟಿ, ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಶ್ರೀ ಶಿವಾನಂದ ಹೆಗಡೆ ಕಡತೋಕ, ಶ್ರೀ ಶಿವರಾಮ ಗಾಂವ್ಕರ್, ಶ್ರೀ ಆರ್.ಎಲ್.ಭಟ್ಟ, ಕುಮಟ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸೂರಿ ಭಟ್, ಶ್ರೀ ನಾರಾಯಣ ಯಾಜಿ, ಕ.ಸಾ.ಪ.ಹೊನ್ನಾವರದ ಅಧ್ಯಕ್ಷರಾದ ಶ್ರೀ ಎಸ್.ಎಚ್.ಗೌಡ, ಶ್ರೀ ಜನಾರ್ಧನ ಹಂದೆ, ಶ್ರೀ ಚಿದಾನಂದ ಭಂಡಾರಿ, ಶ್ರೀ ತಿಗಣೀಶ, ಶ್ರೀ ನಾಗರಾಜ ಜೋಶಿ, ಡಾ. ಶ್ರೀಪಾದ ಶೆಟ್ಟಿ, ಖ್ಯಾತ ಸಾಹಿತಿಗಳು ಮುಂತಾದವರು ಉಪಸ್ಥಿತರಿದ್ದರು.











