Written by 4:02 am News

ಜನವರಿ 14 ರಿಂದ ಕಟೀಲು ಆರು ಮೇಳಗಳ ಯಕ್ಷಗಾನ ಬೆಳಗ್ಗಿನವರೆಗೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳೀಯ ಆರೂ ಮೇಳಗಳ ಯಕ್ಷಗಾನ ಕಳೆದ ಬಾರಿ ಕಾಲಮಿತಿಗೆ ಒಳಪಟ್ಟಿದ್ದು ಈ ಬಾರಿ ಮೇಳ ತಿರುಗಾಟ ನಡೆಸಿ ಸುಮಾರು ಒಂದುವರೆ ತಿಂಗಳ ನಂತರ ಅಂದರೆ ಜನವರಿ 14 ರಿಂದ ಮತ್ತೆ ಬೆಳಗಿನವರೆಗೆ ಪ್ರದರ್ಶನ ಕಾಣಲಿದೆ. ಮಾನ್ಯ ಉಚ್ಛ ನ್ಯಾಯಾಲಯದ ಆದೇಶ ಮತ್ತು ಶ್ರೀ ಕ್ಷೇತ್ರದ ಭಕ್ತರ ಅಪೇಕ್ಷೆ ಮೇರೆಗೆ ಜನವರಿ 14 ಮಕರ ಸಂಕ್ರಮಣದಿಂದ ಬೆಳಗಿನವರೆಗೆ ಯಕ್ಷಗಾನ ನಡೆಯಲಿದೆ. ಬೆಳಿಗ್ಗೆ ೬.೦೦ ಗಂಟೆಗೆ, ಮದ್ಯಾಹ್ನ ೧೨.೩೦ರಿಂದ ೧.೩೦ ಮತ್ತು ರಾತ್ರಿ ೮.೩೦ ಕ್ಕೆ ಚೌಕಿ ಪೂಜೆ ನಡೆಯಲಿದೆ ಎಂದು ದೇವಳದ ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಅನುವಂಶಿಕ ಮುಕ್ತೇಸರ ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ ಹಾಗೂ ಅನುವಂಶಿಕ ಮುಕ್ತೇಸರರಾದ ವಾಸುದೇವ ಅಸ್ರಣ್ಣ ಪತ್ರಿಕಾ ಹೇಳಿಕೆ ನೀಡಿದ್ದಾರೆ.

(Pic Credit: Yaksha Madava)

Visited 27 times, 1 visit(s) today
Close Search Window
Close