ಮಂಗಳೂರು: ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ (ರಿ.), ಮಂಗಳೂರು ಮತ್ತು ಶ್ರೀ ಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನ ಇವರ ಪ್ರೋತ್ಸಾಹದೊಂದಿಗೆ ಕೊಡಮಾಡುತ್ತಿರುವ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸೂರಿಕುಮೇರು ಗೋವಿಂದ ಭಟ್ ಮತ್ತು ಯಕ್ಷ ಕುಸುಮ ಯುವ ಪುರಸ್ಕಾರಕ್ಕೆ ಸಾತ್ವಿಕ್ ನೆಲ್ಲಿತೀರ್ಥ ಅವರನ್ನು ಆಯ್ಕೆ ಮಾಡಿದೆ.
ಇದೇ ಬರುವ ಫೆಬ್ರುವರಿ ೧೧, ಭಾನುವಾರ ಕುದ್ರೋಳಿ ಭಗವತೀ ದೇವಸ್ಥಾನದ ಕೂಟಕ್ಕಳ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದೆ. ಜೊತೆಗೆ ಹಟ್ಟಿಯಂಗಡಿ ಮೇಳದವರಿಂದ ಚಂದ್ರಹಾಸ- ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನವಿದೆ.