Written by 5:43 am Articles

ಯಕ್ಷಗಾನ ಕಾಶಿ ಗುಂಡಬಾಳ | ಸಿಂಚನಾ ಜೈನ್ ಮುಟ್ಟದ ಬಸದಿ

ಯಕ್ಷಗಾನ ಕಾಶಿ ಗುಂಡಬಾಳ

ಯಕ್ಷಗಾನ ಕ್ಷೇತ್ರದಲ್ಲಿಕರ್ನಾಟಕದ ಪ್ರಕ್ರತಿ ವಿಸ್ಮಯ ಜಿಲ್ಲೆ ಎಂದು ಗುರುತಿಸಲಾದ ಉತ್ತರ ಕನ್ನಡದ ಒಂದು ತಾಲೂಕಾದ ಹೊನ್ನಾವರದಿಂದ 15 ಕೀ.ಮೀ.ದೂರವಿರುವ ಊರು ಗುಂಡಬಾಳ. ಪ್ರತಿ ದೇವಸ್ಥಾನಗಳಂತೆ ಈ ದೇವಸ್ಥಾನವು ಹರಕೆಯ ರೂಪದಲ್ಲಿ ಯಕ್ಷಗಾನ ಪ್ರದರ್ಶನ ನೀಡುವ ಹರಕೆ ಮಾಡಿಕೊಳ್ಳಲು ತಿಳಿಸುತ್ತವೆ.ಇದು ವಿಶೇಷ ರೀತಿಯ ಹರಕೆ ಅಲ್ಲವೇ!!! ನಾನು ಚಿಕ್ಕವಳಿದ್ದಾಗ ಒಬ್ಬ ಕಲಾವಿದರು ಹೇಳಿದ ಮಾತು ಅಚ್ಚಳಿಯದೆ ಉಳಿದಿದೆ ಅದೇನೆಂದರೆ “ಗುಂಡಬಾಳದಲ್ಲಿ ಕಲಾವಿದನಾಗಿ ಬರುವ ಪ್ರತಿ ಕಲಾವಿದನಿಗೂ ಶ್ರದ್ದೆ ಮತ್ತು ಸಹನೆ ಬಹಳ ಮುಖ್ಯ” ಎಂದು. ಕಾರಣವಿಷ್ಟೇ ಗೆಳೆಯರೇ, 12 ಗಂಟೆಯ ನಂತರ ಕೊರೆವ ಚಳಿಯಲ್ಲಿ ಯಾರು ಇಲ್ಲದ ದಿನಗಳವೆ ಅದರೂ ಸ್ರಷ್ಟಿಕರ್ತ ಒಬ್ಬ ಇದ್ದಾನೆ ಎಂಬಂತೆ ರಾತ್ರಿ 8 ಗಂಟೆಯಿಂದ ಪ್ರಾರಂಭಗೊಂಡು ಬೆಳಿಗ್ಗೆ 5 ಗಂಟೆಯ ತನಕವೂ ಅಗ್ನಿಯಂತೆ ‌ ಸದಾ ಉತ್ಸಾಹ ಮತ್ತು ಶಕ್ತಿಯನ್ನು ನೀಡುವ ದೇವರೇ ಬಲ್ಲ.. ಎಂಬಂತೆ ಭಾಸ.

ಶತಮಾನದ ಇತಿಹಾಸವನ್ನು ಹೊಂದಿರುವ ಗುಂಡಬಾಳದಲ್ಲಿ ಈ ವರ್ಷದ ಹರಕೆ ಆಟಗಳ ಸರಣಿಯು ಜ. 6 ರಂದು ಪ್ರಾರಂಭಗೊಳ್ಳುತ್ತಿದೆ. ಸತತ ಐದು ತಿಂಗಳು ಕಾಲ ಪ್ರತಿದಿನ ರಾತ್ರಿ ಚಂಡೆ, ಮದ್ದಲೆಗಳ ಸದ್ದಿನೊಂದಿಗೆ ಯಕ್ಷ ವೈಭವ ತೆರೆದುಕೊಳ್ಳಲಿದೆ.

ಪುರಾತನ ರಂಗಮಂದಿರ ( ಚಿತ್ರ ಕೃಪೆ : www.kamat.com )

ಯಕ್ಷರಂಗದ ಉದಯೋನ್ಮುಖ ಕಲಾವಿದರಿಗೆ ಆಶ್ರಯ ನೀಡುವ ಗುಂಡಬಾಳ ಶ್ರೀ ಮುಖ್ಯಪ್ರಾಣ ಲಕ್ಷ್ಮೀವೆಂಕಟೇಶ ದೇವರ ಸನ್ನಿಧಿಯು ‘ಯಕ್ಷಗಾನ ಕಾಶಿ’ ಎಂದು ಪ್ರಸಿದ್ದಿ ಪಡೆದಿದೆ. ಪ್ರತಿ ವರ್ಷ ಮಾಗಶೀರ್ಷ ಕೃಷ್ಣ ದಶಮಿಯಿಂದ ವೈಶಾಖ ಕೃಷ್ಣ ದಶಮಿಯವರೆಗೆ ಸುಮಾರು 5 ತಿಂಗಳು ಕಾಲ ಒಂದೇ ವೇದಿಕೆಯಲ್ಲಿ ಸತತ ಯಕ್ಷಗಾನ ನಡೆಯುವುದು.

 ಯಕ್ಷಗಾನ ಪ್ರಿಯ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ ದೇವರು

ಗುಂಡಬಾಳದಲ್ಲಿ ಸುಮಾರು 100 ವರ್ಷಗಳಿಗಿಂತ ಹಿಂದಿನಿಂದ ಸತತವಾಗಿ ಹರಕೆ ಆಟ ನಡೆದುಕೊಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ. 1948 ರಿಂದ ಇಲ್ಲಿ ಯಕ್ಷಗಾನ ನಡೆಸುವುದಕ್ಕಾಗಿಯೇ ಒಂದು ನಿರ್ದಿಷ್ಟ ಮೇಳವನ್ನು ಕೂಡಿಸಿಕೊಂಡು ಅದಕ್ಕಾಗಿ ಒಬ್ಬ ಮೇಳದ ಯಜಮಾನನನ್ನು ನೇಮಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಯಕ್ಷಗಾನ ಪ್ರಿಯ ಶ್ರೀ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಕಲೆಯ ನೈಜ ಸತ್ವದೊಂದಿಗೆ ಪುರಾಣ ಕತೆಗಳ ಪ್ರದರ್ಶನ ನಡೆಯುತ್ತದೆ. ಪೌರಾಣಿಕ ನೀತಿಕತೆಗಳನ್ನು ಸಾರುವ ಈ ನೆಲದ ಸೊಗಡಿನ ಯಕ್ಷಗಾನ ಕಲೆಯು ಅನ್ಯ ಕಲೆಗಳ ಅನುಕರಣೆಯಿಂದಾಗಿ ತನ್ನ ಪರಂಪರೆಯನ್ನು ಕಳಚಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಪವಿತ್ರವಾದ ಈ ಕಲೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುಂಡಬಾಳ ರಂಗಮಂದಿರದಲ್ಲಿ ಯಕ್ಷಗಾನ ಪ್ರದರ್ಶನ.ಕಾರ್ಯ ಗುಂಡಬಾಳದಲ್ಲಿ ನಡೆಯುತ್ತಿದೆ.

“ನಿರ್ಲಿಪ್ತನಾಗಿ ಅರಳು”

ಖಿನ್ನವಾದರೆ ನೀನು ಅನ್ಯರಿಗೆ ನಗೆಗೆಣೆಯು
ಮಾನ್ಯ ಮನ್ನೆಯರೆಲ್ಲರನುಕಂಪ ಕ್ಷಣ ಕಾಲ
ನಿನ್ನ ಶಕ್ತಿಗೆ ತುಕ್ಕು ಹೆರರ ನೆರಳಾಶ್ರಯವು
ಖಿನ್ನತೆಯ ಹೆಡೆಮೆಟ್ಟು ಉನ್ನತದ ಗುಡಿ ನೋಡು

ಅಲ್ಲಿ ಬೀಸುವಗಾಳಿ ಹರಿವಶಕ್ತಿಯ ಮೋಡಿ
ಚಲನಶೀಲತೆ ತವರು ಕ್ರತುಶಕ್ತಿಯ ನೆಲೆಯೂರು
ನರಸಿಂಗ ನೀನೇಳು ಆಗದಿರು ಮೊದ್ದುಮಣಿ
ನಿನ್ನೊಳಗೆ ನೋಡು ಉತ್ಥಾನ ಮುಖಿ ಅಗ್ನಿಶಿಖಿ.
ಏಳು ಸೂರ್ಯನ ಮರಿಯೆ ಬೆಳಗು ಸುತ್ತಿನಲೋಕ
ಮಬ್ಬು ಕತ್ತಲೆಮಾಯೆ ಕಣ್ಣೆರೆದು ಒದ್ದುಬಿಡು
ಸಂತೃಪ್ತ ಬದುಕಿನಲಿ ಸಮೃದ್ಧಿಯರಳುವುದು
ಬೆಳಕು ತುಂಬಿದ ಅರಿವು ಬೆಳಗುವುದು ನಿನ್ನ ಬದುಕ.
ಇತಿಹಾಸ ತಿಳಿಸುವ ಸಮಯದಲ್ಲಿ ನೆನಪಾದ ಓದಿದ ಪುಟ್ಟ ಕವನ..!

ಪ್ರತಿವರ್ಷ ಸುಮಾರು 145 ಸೇವೆ ಆಟಗಳು ಇಲ್ಲಿ ನಡೆಯುತ್ತವೆ. ಪ್ರತಿದಿನ ಇಬ್ಬರು ಹರಕೆದಾರರಂತೆ ಸುಮಾರು 290 ಹರಕೆ ಸಲ್ಲಿಕೆಯಾಗುತ್ತದೆ. ಅವುಗಳಲ್ಲಿ 118 ಖಾಯಂ ಸೇವೆಯನ್ನು ಹೊಂದಿರುವ ಹರಕೆದಾರರಿದ್ದು ಪ್ರತಿವರ್ಷ ಇವರ ಸರದಿ ಬರುತ್ತದೆ. ಉಳಿದಂತೆ 172 ಹೊಸ ಸೇವೆ ಆಟಗಳನ್ನು ಮಾಡಿಸಲು ಅವಕಾಶವಿದ್ದು, ಪ್ರತಿವರ್ಷ ಹೊಸ ಹರಕೆದಾರರು ಯಕ್ಷಗಾನ ಹರಕೆಯನ್ನು ನೋಂದಾಯಿಸುತ್ತಾರೆ. ಈಗಾಗಲೇ ಹಲವು ಹರಕೆ ಸೇವೆಗಳು ನೋಂದಣಿಯಾಗಿದ್ದು, ಹೊಸದಾಗಿ ಇಂದು ಯಕ್ಷಗಾನ ಸೇವೆಯ ಹರಕೆ ನೋಂದಾಯಿಸಿದರೆ ಮುಂದಿನ ಏಳೆಂಟು ವರ್ಷಗಳ ನಂತರ ಯಕ್ಷಗಾನ ಹರಕೆ ಸೇವೆ ಸಲ್ಲಿಸುವ ಸರತಿ ಬರುತ್ತದೆ.

ಹೊಸ ಕಲಾವಿದರನ್ನು ಸಿದ್ದಗೊಳಿಸುವ ರಂಗಮಂದಿರ

ಗುಂಡಬಾಳ ರಂಗಮಂದಿರವು ಭಕ್ತರ ಇಚ್ಛೆ ಪೂರೈಸುವ ಹರಕೆಯಾಟ ಪ್ರದರ್ಶನಕ್ಕಷ್ಟೇ ಸೀಮಿತ ಆಗಿರದೆ ಯಕ್ಷಗಾನ ಕಲಾವಿದರನ್ನು ಸಿದ್ದಗೊಳಿಸುವ ಶಾಲೆಯ ರೀತಿಯಲ್ಲೂ ಕಾರ್ಯನಿರ್ವಹಿಸುತ್ತದೆ. ಯಕ್ಷಗಾನ ಕಲಿಯಬೇಕೆನ್ನುವ ಇಚ್ಛೆಯುಳ್ಳ ಯುವಕರು ಗುಂಡಬಾಳಕ್ಕೆ ಬಂದು ಸೇರಿಕೊಳ್ಳುತ್ತಾರೆ. ಹೊಸ ತಲೆಮಾರಿನ ಕಲಾವಿದರು ಇಲ್ಲಿಂದಲೇ ಕಲಾ ಜೀವನವನ್ನು ಆರಂಭಿಸಿ ಹೆಸರು ಗಳಿಸುತ್ತಿದ್ದಾರೆ. ಇಲ್ಲಿ ಗೆಜ್ಜೆಕಟ್ಟಿ ಯಕ್ಷರಂಗಕ್ಕೆ ಮುನ್ನುಡಿ ಬರೆದ ಅದೆಷ್ಟೋ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಜಲವಳ್ಳಿ ವೆಂಕಟೇಶ ರಾವ್, ಸತ್ಯ ಹೆಗಡೆ ಅವರಂಥ ಯಕ್ಷರಂಗದ ಪ್ರಸಿದ್ಧ ಕಲಾವಿದರನ್ನು ಕೊಡುಗೆಯಾಗಿ ನೀಡಿರುವುದು ಇದೇ ರಂಗಮಂದಿರ.

ಚಿತ್ರದಲ್ಲಿ ಹೊಸ್ತೋಟ ಮಂಜುನಾಥ ಭಾಗವತರನ್ನು ನೋಡಬಹುದು (ಹಳೆ ಸಂಗ್ರಹ)

8 ವರ್ಷ ಕಾಯಬೇಕು

ಪ್ರತಿವರ್ಷ ಸುಮಾರು 145 ಸೇವೆ ಆಟಗಳು ಇಲ್ಲಿ ನಡೆಯುತ್ತವೆ. ಪ್ರತಿದಿನ ಇಬ್ಬರು ಹರಕೆದಾರರಂತೆ ಸುಮಾರು 290 ಹರಕೆ ಸಲ್ಲಿಕೆಯಾಗುತ್ತದೆ. ಅವುಗಳಲ್ಲಿ 118 ಖಾಯಂ ಸೇವೆಯನ್ನು ಹೊಂದಿರುವ ಹರಕೆದಾರರಿದ್ದು ಪ್ರತಿವರ್ಷ ಇವರ ಸರದಿ ಬರುತ್ತದೆ. ಉಳಿದಂತೆ 172 ಹೊಸ ಸೇವೆ ಆಟಗಳನ್ನು ಮಾಡಿಸಲು ಅವಕಾಶವಿದ್ದು, ಪ್ರತಿವರ್ಷ ಹೊಸ ಹರಕೆದಾರರು ಯಕ್ಷಗಾನ ಹರಕೆಯನ್ನು ನೋಂದಾಯಿಸುತ್ತಾರೆ. ಈಗಾಗಲೇ ಹಲವು ಹರಕೆ ಸೇವೆಗಳು ನೋಂದಣಿಯಾಗಿದ್ದು, ಹೊಸದಾಗಿ ಇಂದು ಯಕ್ಷಗಾನ ಸೇವೆಯ ಹರಕೆ ನೋಂದಾಯಿಸಿದರೆ ಮುಂದಿನ ಏಳೆಂಟು ವರ್ಷಗಳ ನಂತರ ಯಕ್ಷಗಾನ ಹರಕೆ ಸೇವೆ ಸಲ್ಲಿಸುವ ಸರತಿ ಬರುತ್ತದೆ.

“ಯಕ್ಷಗಾನಂ ಗೆಲ್ಗೆ.ಯಕ್ಷಗಾನಂ ಬಾಳ್ಗೆ “

 

 

 

 

ಲೇ: ಸಿಂಚನಾ ಜೈನ್ ಮುಟ್ಟದ ಬಸದಿ

 2024ರ ಮೊದಲ ಸೇವೆ ಆಟದ ತುಣುಕು (6 ಜನವರಿ 2024)

Visited 428 times, 1 visit(s) today
Close Search Window
Close