ಬಣ್ಣ ಹಚ್ಚಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮತ್ತು ಕರುನಾಡ ಕಾನನದ ಕುವರ ಯಕ್ಷ ಸುಪುತ್ರ ಪ್ರೀತಿಯ ಚಂದ್ರಣ್ಣ (ಚಂದ್ರಹಾಸ ಗೌಡ ಹೊಸಪಟ್ಟಣ)
ಕಳೆದ ಹದಿನಾರು ವರ್ಷಗಳ ರಂಗ ಪಯಣದಲ್ಲಿ ನೂರಾರು ಪ್ರಸಂಗಗಳ ಪಾತ್ರಗಳನ್ನು ಜೀವಿಸಿರುವ ಇವರು ಹಿರಿ-ಕಿರಿಯ ಸಹಕಲಾವಿದರಿಂದ ಹಲವಾರು ಸಂಗತಿಗಳನ್ನು ಅರಿತು, ಅನುಸರಿಸಿ, ಅಳವಡಿಸಿಕೊಳ್ಳುವ ಮೂಲಕ ಕಲೆಯಲ್ಲಿ ಮಾಗುತ್ತಾ ಸಾಗಿ ಬಂದ ಇವರು ಎಂದೂ ಬೀಗಿದವರಲ್ಲ. ಈ ಕಾರಣದಿಂದಾಗಿಯೇ ಕರಾವಳಿಯ ಮೂರು ಜಿಲ್ಲೆಗಳಲ್ಲಷ್ಟೇ ಅಲ್ಲದೆ ಯಕ್ಷಗಾನ ಪ್ರೀತಿಯುಳ್ಳ ಇತರೆಡೆಗಳಲ್ಲಿಯೂ ಇವರನ್ನು ಒಬ್ಬ ಕಲಾವಿದನಾಗಿ ಹಚ್ಚಿಕೊಂಡ ಸಾಕಷ್ಟು ಜನಮನಗಳಿವೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಂತಹ ಮೇರು ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿ ಅವರುಗಳ ಮೆಚ್ಚುಗೆ ಮತ್ತು ಆಶೀರ್ವಾದ ಪಡೆದ ಇವರು ಈ ಹೊತ್ತಿಗೆ ಯಾವುದೇ ಪ್ರಸಂಗದ ಯಾವುದೇ ಪಾತ್ರ ನೀಡಿದರೂ ಆ ಪಾತ್ರಕ್ಕೆ ಜೀವ ತುಂಬಬಲ್ಲ ಪ್ರೌಢಿಮೆ ಪಡೆದುಕೊಂಡಿರುವರು. ಇದು ಆತ್ಮಪ್ರಶಂಸೆಯಲ್ಲ; ಅವರ ಆತ್ಮವಿಶ್ವಾಸ. ಅಭಿಮನ್ಯು ಕಾಳಗ ಮತ್ತು ಕನಕಾಂಗಿ ಕಲ್ಯಾಣದ ಅಭಿಮನ್ಯು, ತರಣಿಸೇನ ಕಾಳಗದ ತರಣಿಸೇನ, ಲವ-ಕುಶದ ವೃಷಸೇನ, ಭಾರ್ಗವ ವಿಜಯದ ಭಾರ್ಗವ, ಸುದರ್ಶನ ವಿಜಯದ ಸುದರ್ಶನ, ವೀರ ಬರ್ಬರಿಕದ ಬರ್ಬರಿಕ, ನಾಗಶ್ರೀಯ ಶೈಥಿಲ್ಯ ಇತ್ಯಾದಿ ಪಾತ್ರಗಳು ನನಗೆ ಅಪಾರ ಜನಮನ್ನಣೆ ತಂದುಕೊಟ್ಟಿರುವುದನ್ನು ಬಹಳ ಪ್ರೀತಿಯಿಂದ ಸ್ಮರಿಸಿಕೊಳ್ಳಿತ್ತಾರೆ. ಚುರುಕಿನ ನಡೆ, ತಾಳಕ್ಕೆ ತಪ್ಪದ ಹೆಜ್ಜೆ, ಲಯದ ಹದವರಿತ ಕುಣಿತ, ಯಕ್ಷಗಾನದ ಪಾರಂಪರಿಕ ಶಾಸ್ತ್ರೀಯತೆಗೆ ಚ್ಯುತಿ ಬಾರದಂತೆ ಯೋಜಿಸಿದ ಹೊಸ ವಿನ್ಯಾಸದ ಅಭಿನಯ, ಮಾತಿನ ಗಟ್ಟಿತನ ಈ ಎಲ್ಲಾ ಕಾರಣಗಳಿಂದ ಜನಮಾನಸವು ‘ ಯಕ್ಷರಂಗದ ಸಿಡಿಲ ಮರಿ’ ಎಂಬ ಅಭಿದಾನದಿಂದ ಕರೆದು ಬೆನ್ನು ತಟ್ಟುತ್ತಾ ಬರುತ್ತಿದೆ.


ಅರಿವು -ಅಭಿವ್ಯಕ್ತಿಯ ಮೊತ್ತವೇ ಶಿಕ್ಷಣ ಎಂಬ ಮಾತು ಕಲಾ ಪ್ರಕಾರಗಳಿಗೂ ಅನ್ವಯವಾಗುತ್ತದೆ. ಗಾಯನ, ವಾದನ, ನರ್ತನ, ವೇಷಭೂಷಣ, ಮಾತುಗಾರಿಕೆಗಳೆಂಬ ಪಂಚ ಅಂಗಗಳಿಂದ ಪರಿಪೂರ್ಣವಾಗಿರುವ ಗಂಡು ಕಲೆ ಯಕ್ಷಗಾನ. ಈ ಕಲೆಯನ್ನು ಕರಗತ ಮಾಡಿಕೊಂಡರೆ ಗಳಿಕೆಗಿಂತ ಮಿಗಿಲಾದ ಆತ್ಮಸಂತೋಷ ಪ್ರಾಪ್ತಿಯಾಗುತ್ತದೆ. ಬದುಕಿನ ಸೌಂದರ್ಯವನ್ನು ಕಂಡುಕೊಳ್ಳುವ, ಭಾಷಾ ಶುದ್ಧಿಯನ್ನು ರೂಢಿಸಿಕೊಳ್ಳುವ, ಮೈಮನಗಳ ಆರೋಗ್ಯ ವೃದ್ಧಿಸಿಕೊಳ್ಳುವ, ಕಲಾ ಪ್ರಪಂಚಕ್ಕೆ ತೆರೆದುಕೊಳ್ಳುವ ಕಾರಣಗಳಿಗಾಗಿ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಬೇಕು; ಆ ಮೂಲಕ ಯಕ್ಷ ಕಲೆಯ ಬೆಳವಣಿಗೆಗೆ ಅಳಿಲು ಸೇವೆ ಸಲ್ಲಿಸಬೇಕೆಂಬ ಸದಾಶಯದೊಂದಿಗೆ ಆರು ವರ್ಷಗಳ ಹಿಂದೆ ‘ ಹೊಸಪಟ್ಟಣ ಕಲಾ ವೃಂದ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಉಚಿತವಾಗಿ ಯಕ್ಷಗಾನ ಕಲಿಕಾ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದ್ದು ನೂರಾರು ಮಕ್ಕಳಿಗೆ ತಾಳ, ಹೆಜ್ಜೆ ಅಭ್ಯಾಸ ಮಾಡಿಸಿ ರಂಗಪ್ರವೇಶ ಮಾಡಿಸಿದ್ದಾರೆ. ಹೊನ್ನಾವರ ತಾಲೂಕಿನ ಮಂಕಿ, ತಲಗೋಡು, ಅಪ್ಸರಕೊಂಡ ಗ್ರಾಮಗಳಲ್ಲಿ ನಿರಂತರ ಒಂದು ವರ್ಷಗಳ ಕಾಲ ಯಕ್ಷಗಾನ ಕಲಿಕಾ ಶಿಬಿರ ಆಯೋಜಿಸಿ ೧೫೦ ಕ್ಕೂ ಹೆಚ್ಚು ಪ್ರತಿಭೆಗಳನ್ನು ಯಕ್ಷರಂಗಕ್ಕೆ ಪರಿಚಯಿಸಿದ್ದಾರೆ. ಬೈಲೂರಿನಲ್ಲಿ ಎರಡು ವರ್ಷಗಳಿಂದ ಯಕ್ಷಗಾನ ಕಲಿಕಾ ಶಿಬಿರ ನಡೆಯುತ್ತಿತ್ತು ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಕಂಸವದೆ, ಕಂಸ ದಿಗ್ವಿಜಯ, ಕೃಷ್ಣ ಲೀಲೆ, ಲವಕುಶ ಹೀಗೆ ಹಲವು ಪ್ರಸಂಗಗಳ ಪ್ರದರ್ಶನಗಳನ್ನು ನೀಡಿದ್ದಾರೆ. ಹೀಗೆ ಯಕ್ಷಗಾನ ಕಲಿತ ಮಕ್ಕಳು ತಮ್ಮ ಶೈಕ್ಷಣಿಕ ಬದುಕಿನಲ್ಲಿಯೂ ಉತ್ತಮವಾದುದನ್ನು ಸಾಧಿಸಲು ಅನುಕೂಲವಾಗಿರುವುದು ಸಾರ್ಥಕ್ಯದ ಭಾವವನ್ನು ತುಂಬಿದೆ ಮಾತ್ರವಲ್ಲ ಇನ್ನಷ್ಟು ಮಕ್ಕಳಿಗೆ ತರಬೇತಿ ನೀಡಲು ಸ್ಪೂರ್ತಿಯನ್ನು ತುಂಬಿದೆ ಎಂಬುದು ಇವರ ನಂಬಿಕೆಯಾಗಿದೆ.
ಕಳೆದ ವರ್ಷ ಚಂದ್ರಣ್ಣ ಯಕ್ಷ ತಿರುಗಾಟದ ಹದಿನೈದು ವರ್ಷಗಳು ಪೂರ್ಣಗೊಂಡ ಹಿನ್ನೆಗೆಯಲ್ಲಿ ‘ ಯಕ್ಷ ಪಂಳಷ್ಟು ಖುಷಿ ನೀಡಿದೆ. ಸಾಧನೆಯ ಹಾದಿಯಲ್ಲಿ ಶಿಖರವೇರು ಎಂಬುದೇ ನಮ್ಮಿಂದ ಶುಭ ಹಾರೈಕೆಯು.
ಕಿರು ಮಾಹಿತಿ:
ಹೆಸರು: ಶ್ರೀ ಚಂದ್ರಹಾಸ ಭೈರು ಗೌಡ.
ತಾಯಿಯ ಹೆಸರು: ಶ್ರೀಮತಿ ಗಣಪಿ ಗೌಡ.
ತಂದೆ ಯವರ ಹೆಸರು: ಶ್ರೀ ಭೈರು ಗೌಡ
ಹೆಂಡತಿ: ಶಿಲ್ಪ
ಮಗಳು: ಗಹನ
ಜನ್ಮ ಸ್ಥಳ : ಹೊಸಪಟ್ಟಣ , ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ
ವಿದ್ಯಾರ್ಹತೆ: ಏಳನೇ ತರಗತಿ
ಯಕ್ಷರಂಗದ ಸೇವೆ: ಕಳೆದ ಹದಿನಾರು ವರ್ಷಗಳಿಂದ (ಮುಂದುವರೆದಿದೆ…)
ಸೇವೆಗೈದ ಮೇಳಗಳು:
1. ಗುಂಡಬಾಳ ಮೇಳ
2. ಬಂಗಾರಮಕ್ಕಿ ಮೇಳ.
3. ಮಡಾಮಕ್ಕಿ ಮೇಳ
4. ಮಂದಾರ್ತಿ
5. ಸಾಲಿಗ್ರಾಮ ಮೇಳ (ಸೇವೆ ಸಲ್ಲಿಸುತ್ತಿದ್ದಾರೆ)
-ಸಿಂಚನಾ ಜೈನ್ ಮುಟ್ಟದಬಸದಿ
Nice post! 1754767391
Maçı yöneten siz oyunu domine ettiniz helal olsun futbolcular ssupsw.in
7095859351
8341237056
9374864255
7684424078