Written by 5:55 am News

ಖ್ಯಾತ ಸಾಹಿತಿ, ಜಾನಪದ ತಜ್ಞ ಪ್ರೊ. ಅಮೃತ ಸೋಮೇಶ್ವರ ನಿಧನ

ಖ್ಯಾತ ಸಾಹಿತಿ, ಜಾನಪದ ತಜ್ಞ ಪ್ರೊ. ಅಮೃತ ಸೋಮೇಶ್ವರರವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ, ತುಳು ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿದ್ದ ಇವರು, ಸಮಾಜಮುಖಿ ಚಂತನೆಯುಳ್ಳ ಸಹೃದಯಿಯಾಗಿದ್ದರು.

ಸಾಕಷ್ಟು ಕೃತಿಗಳನ್ನು ರಚಿಸಿದ್ದ ಅವರು 30ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದರು.

ಶ್ರೀ ಅಮೃತ ಸೋಮೇಶ್ವರ ಅವರು ಬರೆದ ಯಕ್ಷಗಾನ ಪ್ರಸಂಗಗಳು (32)
1.ಅಮರಶಿಲ್ಪಿ ವೀರಕಲ್ಕುಡ
2. ಸಹಸ್ರಕವಚಮೋಕ್ಷ
3.ಕಾಯಕಲ್ಪ,
4.ಪುತ್ತೂರಮುತ್ತು
5.ಅಮರವಾಹಿನಿ
6.ತ್ರಿಪುರ ಮಥನ
7.ಮಹಾಕಲಿ ಮಗಧೇಂದ್ರ
8.ವಂಶವಾಹಿನಿ
9.ಮಹಾಪೂರ ಭೌಮಾಸುರ
10.ಚಕ್ರವರ್ತಿ ದಶರಥ
11.ಚಂದ್ರಮತೀ ಸ್ವಯಂವರ
12.ವರುಣಯಾಗ
13.ಸಾರ್ವಭೌಮ ಸಹಸ್ರಾನೀಕ
14.ಚಾಲುಕ್ಯ ಚಕ್ರೇಶ್ವರ
15.ಅಂಧಕಮೋಕ್ಷ
16. ಘೋರ ಮಾರಕ
17.ಮಾರಿಷಾ ಕಲ್ಯಾಣ
18.ಅಂಗುಲಿಮಾಲಾ,
19.ಅಮರವೀರದ್ವಯ ಕೋಟಿಚೆನ್ನಯ
20. ಅರುಣ ಸಾರಥ್ಯ
21. ಋಷ್ಯಶೃಂಗ
22.ತನಿಯ-ಗುರುವರ ಕಾಳಗ
23.ಪ್ರಜ್ಞಾವಿಜಯ,
24.ಭುವನಭಾಗ್ಯ
25.ಮದಿರಾಸುರ ಮರ್ದನ
26.ಮಿತ್ರಭೇದ
27.ವಿದ್ಯಾವಿಜಯ
28.ಶ್ರೀದೇವಿಭಗವತಿ
29..ಸಂಗ್ಯಾ ಬಾಳ್ಯಾ
30.ಸತ್ಯನಾಪುರದ ಸಿರಿ
31.ಸಿರಿರಾಮ ಪಾದುಕೆ
32.ರುಧಿರ ಮೋಹಿನಿ

Visited 112 times, 1 visit(s) today
Close Search Window
Close