ಕುಮಟಾ: ಇಂದು ಮೆಕ್ಕೆಕಟ್ಟು ಮೇಳದವರಿಂದ ಕುಮಟಾದಲ್ಲಿ ನಡೆಯುತ್ತಿರುವ ಯಕ್ಷಗಾನ ಪ್ರದರ್ಶನದಲ್ಲಿ ಕರಾವಳಿಯ ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಅವರನ್ನು ಹಾಸ್ಯರತ್ನ ರಮೇಶ್ ಭಂಡಾರಿ ಅವರು ಸನ್ಮಾನಿಸುವ ಮೂಲಕ ಒಂದು ಅಪೂರ್ವ ಗಳಿಗೆಗೆ ಸಾಕ್ಷಿಯಾದರು.
ಪೆರ್ಡೂರು ಮೇಳದಲ್ಲಿ ತನ್ನನ್ನು ಮೆರೆಸಿದ ರಂಗಮಾಂತ್ರಿಕ ಧಾರೇಶ್ವರರನ್ನು ಗುರುಗಳಂತೆ ಕಂಡವರು ರಮೇಶ್ ಭಂಡಾರಿಯವರು. ಅವರನ್ನು ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸನ್ಮಾನಿಸಿದ್ದು ನಿಜಕ್ಕೂ ಒಬ್ಬ ಕಲಾವಿದ ತನ್ನ ಗುರುವಿಗೆ ನೀಡಿದ ಅಭೂತಪೂರ್ವ ಗೌರವ. ಆ ಕ್ಷಣದ ವಿಡಿಯೋ ಇಲ್ಲಿದೆ ನೋಡಿ.








