ಬೆಳ್ತಂಗಡಿ: ತೆಂಕಿನ ಯುವ ಭಾಗವತರಾದ ಶ್ರೀಮತಿ ಕಾವ್ಯಶ್ರೀ ಆಜೇರು ಅವರು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಸುವರ್ಣ ಆರ್ಕೆಡ್ ಬೆಳ್ತಂಗಡಿ ವತಿಯಿಂದ ಕೊಡಮಾಡುವ ಸುವರ್ಣ ರಂಗ ಸಮ್ಮಾನ್ 2024 ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫೆಬ್ರುವರಿ ೨೦ರಂದು ಸುವರ್ಣ ಆರ್ಕೆಡ್ ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಆಜೇರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ರವೀಶ್ ಪಡುಮಲೆ ಹಾಗೂ ಕಲಾಪೋಷಕರಾದ ಭುಜಬಲಿ ಅವರಿಗೆ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿಲಾಯಿತು.









