Written by 2:21 am News

ರಂಗಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಬೆಂಗಳೂರು: ರಂಗದಲ್ಲಿ ಕುಣಿಯುವ ಪಾತ್ರಧಾರಿಗೆ ತನ್ನ ಪಾತ್ರದ ಚಿಂತೆ ಮಾತ್ರ ಇರುತ್ತದೆ. ಆ ದಿನಕ್ಕೆ ಕೌರವನಾದರೆ, ಕೀಚಕನಾದರೆ ಆ ಪಾತ್ರವನ್ನು ಅಭಿನಯಿಸಿದರೆ ಸಾಕು. ಆದರೆ ಭಾಗವತ ಹಾಗಲ್ಲ ಅವರಿಗೆ ಎಲ್ಲ ಭಾವಗಳೂ ಬೇಕು. ಕ್ಷಣಕ್ಷಣಕ್ಕೂ ಬದಲಾಗಬೇಕು. ಎಲ್ಲ ಭಾವ ಹಾಗೂ ಎಲ್ಲ ಪಾತ್ರಗಳನ್ನೂ ಮೈ ಮೇಲೆ ಆಹ್ವಾನಿಸಿಕೊಂಡರೆ ಮಾತ್ರ ಅವರೊಬ್ಬ ಯಶಸ್ವಿ ಭಾಗವತರಾಗುತ್ತಾರೆ ಎನ್ನುತ್ತಿದ್ದ ಕರಾವಳಿಯ ಗಾನಕೋಗಿಲೆ ಇನ್ನು ನೆನಪು ಮಾತ್ರ.
ಧಾರೇಶ್ವರ ಭಾಗವತರು ಎಂದೇ ಖ್ಯಾತರಾಗಿದ್ದ ಇವರು ಸುಮಾರು ನಾಲ್ಕು ದಶಕಗಳಿಂದ ಯಕ್ಷಗಾನ ಸೇವೆಯಲ್ಲಿ ತೊಡಗಿಕೊಂಡವರು. ಅವರ ನೆನಪಿನ ಬುತ್ತಿಯಲ್ಲಿ ಅದೆಂತಹ ಘಟನೆಗಳು ಇವೆ. ಪ್ರಾಚಾರ್ಯ ನಾರ್ಣಪ್ಪ ಉಪ್ಪುರರ ಶಿಷ್ಯರಾಗಿ, ಕಾಳಿಂಗ ನಾವುಡರ ಸಹವರ್ತಿಯಾಗಿ ಬಡಗು ತಿಟ್ಟಿನ ಮಹಾನ್ ಕಲಾವಿದರನ್ನು ಕುಣಿಸಿದ ಅವರು ಇಂದು ನೆನಪು ಮಾತ್ರ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಅವರ ಸಂದರ್ಶನದ ಲಿಂಕ್:

Visited 104 times, 1 visit(s) today
Close Search Window
Close