Written by 11:11 am News

ಯಕ್ಷಸಂವರ್ಧನಾ (ರಿ.) ಶಿವಮೊಗ್ಗ ವತಿಯಿಂದ ಸನ್ಮಾನ – ಯಕ್ಷಗಾನ – ಮತ್ತು ಪ್ರತಿಭಾ ಪುರಸ್ಕಾರ

ಶಿವಮೊಗ್ಗ: ಯಕ್ಷಸಂವರ್ಧನಾ (ರಿ.) ಶಿವಮೊಗ್ಗ ಇದರ “ವಾರ್ಷಿಕೋತ್ಸವ “ದಿನಾಂಕ 17.2.2024 ಶನಿವಾರ ಮತ್ತು 18 -2-2024 ಭಾನುವಾರದಂದು ಯಕ್ಷೋತ್ಸವ -2024 ಎನ್ನುವ ಹೆಸರಿನಲ್ಲಿ ಸನ್ಮಾನ – ಯಕ್ಷಗಾನ – ಮತ್ತು ಪ್ರತಿಭಾ ಪುರಸ್ಕಾರದೊಂದಿಗೆ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದ ಅ.ಪ. ರಾಮ ಭಟ್ ವೇದಿಕೆಯಲ್ಲಿ ಸಾಂಗವಾಗಿ ನೆಲೆವೇರಿತು. ಇದರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಆನಂದ ಶೆಟ್ಟಿ ಅವರು ಭಾಗವಹಿಸಿದ್ದರು ಹಾಗೆ ಮುಖ್ಯ ಅತಿಥಿಗಳಾಗಿ ಶ್ರೀ ಅವಿನಾಶ್ ಟಿ ಪ್ರಾಂಶುಪಾಲರು,ಸಹ್ಯಾದ್ರಿ ವಾಣಿಜ್ಯ ಕಾಲೇಜು ಶಿವಮೊಗ್ಗ, ಮತ್ತು ಇನ್ನೋರ್ವ ಮುಖ್ಯ ಅತಿಥಿ ಹಾಗೂ ಕಲಿಕಾ ತರಗತಿಗಳಿಗೆ ಸ್ಥಳಾವಕಾಶ ಮಾಡಿಕೊಟ್ಟ ಶಿವಮೊಗ್ಗ ವಿನೋಬನಗರದ ಕ್ರಿಯೇಟಿವ್ ಕಿಡ್ಸ್ ಇದರ ಮಾಲಿಕರಾದ ಶ್ರೀಮತಿ ದೀಪ್ತಿ ಆರ್. ಶೆಟ್ಟಿ ಯವರು ಹಾಗೂ ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಭಾಗವಹಿಸಿದ್ದರು. ಸಮಾಜದಲ್ಲಿ ಸೇವೆ ಸಲ್ಲಿಸಿರುವಂತಹ ಇಬ್ಬರು ಗಣ್ಯರಾದ ಶ್ರೀಮತಿ ವೀಣಾ ನಾಗರಾಜ್ ಮತ್ತು ಶ್ರೀ ಎಮ್. ಕೆ.ಶ್ರೀಧರ ಶೆಟ್ಟಿ ಇವರನ್ನು ಕ್ರಮವಾಗಿ ರೂ. ಇಪ್ಪತ್ತು ಸಾವಿರ ಮತ್ತು ಐದು ಸಾವಿರ ನಗದು ಮತ್ತು ಸನ್ಮಾನ ಫಲಕಗಳೊಂದಿಗೆ ಗೌರವಿಸಲಾಯಿತು. ಯಕ್ಷ ಗುರು ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರ ಘನ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವು ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಭಾರತಿ ಸುದರ್ಶನ್ ಇವರ ಸ್ವಾಗತ, ಹಾಗೂ ಸಂಸ್ಥೆಯ ಜೊತೆ ಕಾರ್ಯದರ್ಶಿ ಶ್ರೀಮತಿ ಮಲ್ಲಿಕಾ ಆರ್.ಭಟ್ ಇವರ ಪ್ರಾರ್ಥನೆ ಮತ್ತು ಸಂಸ್ಥೆಯ ನಿರ್ದೇಶಕರಾದ ಶ್ರೀ ಸುರೇಶ್ ಶೆಟ್ಟಿ ಅವರ ಪ್ರಾಸ್ತಾವಿಕ ನುಡಿ ಮತ್ತು ಶ್ರೀ ಕೆ ಜಿ ವೆಂಕಟೇಶ್ ಇವರ ಧನ್ಯವಾದಗಳೊಂದಿಗೆ ಸಂಪನ್ನಗೊಂಡಿತು.


ನಂತರ ಎರಡು ದಿನವೂ ಕೂಡ ಯಕ್ಷಸಂವರ್ಧನಾದ ಕಲಿಕಾ ತರಗತಿಗಳ ಮಕ್ಕಳು,ಮಹಿಳೆಯರು ಮತ್ತು ಪುರುಷ ಕಲಾವಿದರಿಂದ “ಪಂಚವಟಿ ” ಹಾಗೂ “ವಾಲಿವಧೆ” ಮತ್ತು “ವೀರ ಬರ್ಬ ರಿಕ “ಹಾಗೂ “ತಾಮ್ರ ಧ್ವಜ ಕಾಳಗ “ಎನ್ನುವಂತ ಪೌರಾಣಿಕ ಯಕ್ಷಗಾನ ಆಖ್ಯಾನಗಳನ್ನು ಪ್ರದರ್ಶಿಸ ಲಾಯಿತು. ಕಲಿಕಾ ತರಗತಿಯ ಪ್ರತಿಯೊಬ್ಬರಿಗೂ “ಪ್ರಮಾಣ ಪತ್ರ”ಗಳನ್ನು ವಿತರಿಸ ಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿಗಳಾದ ಶ್ರೀ ಗೋವಿಂದರಾಯ ನಾಯಕ್, ಉಪಾಧ್ಯಕ್ಷರಾದ ಶ್ರೀ ಮಂಜುನಾಥ ರಾಯ್ಕರ್, ಶ್ರೀ ಪ್ರಭಾಕರ್ ಹಾಗೂ ಶ್ರೀಮತಿ ಕಿರಣ್ ಆರ್ ಪೈ ಮತ್ತು ಶ್ರೀ ಶ್ರೀಧರ ಚಾತ್ರ ಅವರು ಭಾಗವಹಿಸಿದ್ದರು. ಹಲವಾರು ಮಹನೀಯರುಗಳು ಈ ಕಾರ್ಯಕ್ರಮಕ್ಕೆ ಸಹಕಾರ ಕೊಟ್ಟಿರುತ್ತಾರೆ. ಅವರೆಲ್ಲರಿಗೂ ನಮ್ಮ ಯಕ್ಷ ಸಂವರ್ಧನಾ ಸಂಸ್ಥೆ ಆಭಾರಿಯಾಗಿದೆ. ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಆಚಾರ್ಯರು ನಿರ್ವಹಿಸಿದರು.

 

Visited 7 times, 1 visit(s) today
Close Search Window
Close