About Us

ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಬಾಲ್ಯದಿಂದ ನೋಡಿದವರು ನಾವು. ಎಲ್ಲೋ ಕೇಳುತ್ತಿದ್ದ ಚೆಂಡೆಯ ಶಬ್ದವನ್ನು ಆಲಿಸುತ್ತಾ ಶಬ್ದದ ದಿಕ್ಕಿಗೆ ಆಟ ಆಡುವ ರಂಗಸ್ಥಳದ ಕಡೆಗೆ ಶತಾಯ ಗತಾಯ ಕಷ್ಟಪಟ್ಟು ಹೋಗುತ್ತಿರುವ ದಿನಗಳು ಇಂದಿಗೂ ನೆನಪಿವೆ. ಕಾಲ ಬದಲಾದಂತೆ ಯಕ್ಷಗಾನದ ಕುರಿತು ಮಾಹಿತಿ ಪೇಪರ್ ನಲ್ಲಿ, ಕರಪತ್ರಗಳಲ್ಲಿ ಬರತೊಡಗಿತು. ಆದರೆ ಪೇಪರ್ ಅಥವಾ ಕರಪತ್ರ ನಮ್ಮೂರಿಗೆತಲುಪುವುದು ಅಪರೂಪವಾಗಿತ್ತು. ಎಲ್ಲೋ ಸಿಕ್ಕಾಗ ನಾವು ಆಟವೆಲ್ಲಿ, ನಾಳೆ ಎಲ್ಲಿ ಎಂದು ಹುಡುಕುವುದು, ಬರೆದಿಟ್ಟುಕೊಳ್ಳುವುದು. ಹೀಗೆ ಹಳೆಯ ನೆನಪುಗಳು ಇಂದಿಗೂ ಮಾಸದಂತಿವೆ. ಇವತ್ತಿನ ಡಿಜಿಟಲ್ ಯುಗದಲ್ಲಿ ಅಂಗೈ ಅಲ್ಲಿ ಎಲ್ಲಾ ಮಾಹಿತಿ ಸಿಗುವ ಸಮಯ. ಅದಕ್ಕೆ ಪೂರಕವೆಂಬಂತೆ ಸಾಮಾಜಿಕ ಜಾಲತಾಣಗಳು ಯಕ್ಷಗಾನದ ಪ್ರಚಾರ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿವೆ. ಅದಕ್ಕೆ ಒಂದು ಹೊಸ ಸೇರ್ಪಡೆ ಎಂಬಂತೆ ರಂಗಸ್ಥಳ.ಕಾಂ ಎಂಬ ವೆಬ್ ಸೈಟ್ ಅನ್ನು ನಿಮ್ಮ ಮುಂದಿಡುತ್ತಿದ್ದೇವೆ. ದಿನ ನಿತ್ಯದ ಯಕ್ಷಗಾನ ಲೋಕದ ಮಾಹಿತಿಯನ್ನು ನಿಮ್ಮ ಮುಂದಿಡುವ ಪ್ರಾಮಾಣಿಕ ಪ್ರಯತ್ನ ನಮ್ಮದು. ಸಹಕರಿಸುವಿರೆಂಬ ನಿರೀಕ್ಷೆಯಲ್ಲಿ. 

-PKJain Creations

Mail: pkjaincpk@gmail.com

Visited 137 times, 1 visit(s) today

Comments are closed.

Close Search Window
Close